Tuesday, February 5, 2013

@@ K r I s H || ನೆನಪಲ್ಲೆ ಬಾಳುತ !!


ಬರೋಬ್ಬರಿ ಆರು ವರ್ಷಗಳೇ ಕಳೆದಿದೆ..
ನನ್ನ ಹೃದಯದ ಬಡಿತ ಕಣ್ಮರೆಯಾಗಿ ಕಳೆದೋಗಿದೆ..
ಮರೆಯಲಾಗದ ನೆನಪಾಗಿ ಅವಳ ನಗು, ಮುದ್ದಾದ ಮುಖ ಕಳೆಗುಂದದೆ ಹೃದಯದ ನೆತ್ತರಾಗಿದೆ...
ಹೌದು ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದೆ ಉಳಿಯುವಂತಹದು ಮೊದಲ ಪ್ರೀತಿ..
ನನ್ನ ಜೀವನದಲ್ಲೂ ಅಷ್ಟೇ..
ಮೊದಲ ಆ ಪ್ರೀತಿಯನ್ನು ತೊದಲೊಡನೆ ಹೇಳುತ್ತಿದ್ದೇನೆ..

ನೋಡಿದಾಕ್ಷಣ ನಾ ಸೋತೆ "ಶೀತಲ್" ಎಂಬ ಮುದ್ದದ ಹುಡುಗಿಗೆ..
ಎಲ್ಲಿ ನೋಡಿದೆ ?? ಯಾಕೆ ನೋಡಿದೆ ?? ಹೇಳ್ತೀನಿ !!
ಅದೊಂದು ಕಾಲ ಕಾಲೇಜ್‌ಗೆ ಹೋಗದೇ ಟ್ಯೂಸನ್ಗೆ ಹೋಗಿ ಓದುತ್ತಿದ್ದ ಕಾಲ..
ನಾನು ಅಷ್ಟೇ ಹಾಗೆಯೇ ಓದಲೆಂದೆ ಸೇರಿದೆ ಅದೇ ಆ ಟ್ಯೂಸನ್ಗೆ..
ಆಗಲೇ ನಾ ನೋಡಿದ್ದು ಅವಳನ್ನು ಮೊದಲ ಬಾರಿ...
9th Aug 2005 ಸಂಜೆ ಸುಮಾರು 6.30 ಇರಬಹುದು..
ಮಂದ ಬೆಳಕಲ್ಲು, ಬೆಳಕಾಗಿಯೇ ಕಂಡಳವಳು..
ಮನೆಗೆ ಹೋಗಿ ರಾತ್ರಿಯೆಲ್ಲ ಅವಳನ್ನೇ ನೆನೆದು ಒದ್ದಾಡುವಾಗಲೇ ಗೊತ್ತಾಗಿದ್ದು..
ಅದು ಪ್ರೀತಿ ಎಂದು..
ಯಾರಿಗೂ ಸೋಲದ ಈ ಮನ ಸೋತಿತು ಎಂದು..



ಪ್ರತಿ ದಿನ ಹೋಗುತ್ತಿದ್ದೆ ಟ್ಯೂಸನ್ಗೆ ಓದಲೆಂದು ಅಲ್ಲ..
ಅವಳನ್ನು ನೋಡಲೆಂದು..
ಎರಡು ವರ್ಷ ಹೀಗೆ ಕಳೆದೋಯಿತು..
ಪ್ರತಿದಿನ ನೋಡುವುದು, ಮಾತನಾಡದೇ ಬರುವುದು..
ನಗುತ್ತಲೇ.. ಹುಚ್ಚನಂತೆ... ಪ್ರೀತಿಸುತ್ತಲೇ..

ಇರುತ್ತಾರಲ್ಲ ಸ್ನೇಹಿತರು ಪ್ರೇಮಿಗಳ ದಿನದಂದು (Feb 14th 2007 ) ಧೈರ್ಯ ತುಂಬಿ ಕಳುಹಿಸಿದರು ನನ್ನನ್ನು..
ಅವಳೆದುರು ಪ್ರೀತಿ ತಿಳಿಸೆನ್ನುತ್ತಾ..
ನಾನು ಹೋದೆ, ಮನದಲ್ಲಿ ಮೌನವಾಗಿದ್ದ ಪ್ರೀತಿಯನ್ನು ತಿಳಿಸಿದೆ.
ಅವಳು ಮೌನಿಯಾಗಿಯೇ ಹೊರಟು ಹೋದಳು..


ಮಾತಿಲ್ಲ ಕಥೆಯಿಲ್ಲ ಬಾರಿ ರೋಮಾಂಚನವೇ ನನಗಂದು..
ಪ್ರೀತಿ ತಿಳಿಸಿದ ಖುಷಿಗೆ..
ಆದರೆ ಆ ಖುಷಿ ಕೊನೆಯಾಗುವ ವೇಳೆ ಬಂದು ಬಿಟ್ಟಿತು..
ಹೌದು... ಪ್ರತಿದಿನ ಬರುತ್ತಿದ್ದ ಅವಳು ಟ್ಯೂಸಾನನ್ನೂ ಬಿಟ್ಟು ಬಿಟ್ಟಿದ್ದಳು..
ಎಲ್ಲಿರುವಳೋ ?? ಹೇಗಿರುವಳೋ ?? ನಾನು ಅವಳಿಗೆ ಇಷ್ಟವೋ ?? ಇಲ್ಲವೋ ??
ಇವೆಲ್ಲ ಪ್ರಶ್ನೆಗಳ ಮಧ್ಯೆ ನನ್ನ ಜೀವನ ಸಾಗುತ್ತಲೇ ಹೋಯಿತು..
ಆದರೆ ಒಂದು ದಿನ ಅವಳು ನನಗೆ ಸಿಗುವಳು ಎಂಬ ನಂಬಿಕೆಯಿತ್ತು..
ಆ ನಂಬಿಕೆ ಸುಳ್ಳಾಗಲಿಲ್ಲ..
3rd Dec 2007 ನಂದು ಅವಳನ್ನು ಅದೇ ಟ್ಯೂಸನ್ ಹತ್ತಿರ ಕಂಡೆ..
( ಮನೆ ಹತ್ತಿರವೇ ಆ ಸ್ಥಳವಿದ್ದುದ್ದರಿಂದ ಪ್ರತಿದಿನ ಅಲ್ಲೇ ತಿರುಗಾಡುತ್ತಾ ಇದ್ದೇ )
ಪ್ರೀತಿ ಬಗ್ಗೆ ಮಾತನಾಡದೇ ಗೆ ಮನೆಗೆ ಬರಬೇಕೆಂದು ಕೇಳಿಕೊಂಡೆ ಅವಳು ಬರುತ್ತಿನಿ ಎಂದು ಹೇಳಿ ಹೊರಟು ಹೋದಳು..
ಇನ್ನೇನು ಮುಂದಿನ ಆ 22 ದಿನಗಳು ನನಗೆ ವರುಷಗಳಂತೆ ಬಾಸವಾಯಿತು..
ಅವಳು ಬಂದಳು ಅವಳ ಸ್ನೇಹಿತರೊಡನೆ..
ಎಲ್ಲಿಲ್ಲದ ಆನಂದ ಈ ಮನದಲ್ಲಂದು..
ಬರೋಬ್ಬರಿ 2 ತಾಸು ಅವಳೊಂದಿಗೆ ಕಳೆದೆ..
ಮನೆಗೆ ಹೊರಡುವ ಸಮಯ ಹತ್ತಿರ ಬರುತ್ತಿದ್ದಂತೆ ನನ್ನ ಮರೆಯೋದಿಲ್ವಾ?? ಎಂದು ಕೇಳಿದಳು..
ನಾನು ನಗುತ್ತಾ ಸುಮ್ಮನಾದೆ..
ಅವಳ ಫೋನ್ ನಂಬರ್ ಕೊಟ್ಟು ಹೊರಟು ಹೋದಳು..
ಅವಳ ಕಣ್ಣಲ್ಲಿ ಮೂಡಿದ ಪ್ರತಿಯೊಂದು ಹನಿಯು ಬಚ್ಚಿಕೊಂಡು ನನ್ನ ಕೂಗಿ ಕರೆಯುತ್ತಿತ್ತು..
ಬೇರೆ ವಿಧಿಯಿಲ್ಲದೇ ಸುಮ್ಮನಾದೆ..
ಆ ದಿನ ಜೀವನದಲ್ಲಿ ಮರೆಯಲಾಗದ ದಿನ..


ನಿದ್ರೆಯಿಲ್ಲದೇ, ಊಟವಿಲ್ಲದೇ ಅವಳ ನೆನಪಲ್ಲೆ ಕಳೆದೆ..
ಬೆಳಿಗ್ಗೆ ನಿದ್ರೆ ಬಂದು ಮಲಗಿದೆ..
ಯಾರೋ ಬಾಗಿಲು ತಟ್ಟಿದ ಶಭ್ದ..
ತೆರೆದರೆ ನನ್ನ ಸ್ನೇಹಿತರು ಯಾವುದೋ ಆಟೋವಿನಲ್ಲಿ ಬಂದು..
ನನ್ನ ಬಾ ಹೊರಗೆ ಹೋಗಿ ಸಿಗರೇಟ್ ಸೇದಿ ಬರೋಣ ಎಂದು ಕರೆದುಕೊಂಡು ಹೋದರು..
ಅವರು ಕರೆದುಕೊಂಡು ಹೋಗಿದ್ದು ನನ್ನ ಹೃದಯದ ಬಡಿತವಾಗಿದ್ದ ನನ್ನ ಶೀತಲ್ ಮನೆಗೆ..
ಯಾಕೆಂದು ಗೊತ್ತಾಗಲಿಲ್ಲ..
ಆಮೇಲೆ ನನ್ನ ಹೃದಯ ಛಿದ್ರವಾಯಿತು..
ನನ್ನ ಪ್ರೀತಿ ಶಾಶ್ವತವಾಗಿ ಮೌನಿಯಾಗಿತ್ತು..
ಬೆಳಿಗ್ಗೆ ಕಾಲೇಜ್ಗೆ ಹೋಗುವಾಗ ಅಪಘಾತವಾಗಿ ಅವಳು ಎಲ್ಲರನ್ನೂ ಬಿಟ್ಟು ದೂರಹೋಗಿಬಿಟ್ಟಿದ್ದಳು..
ಆದರೆ ನನ್ನಿಂದ ದೂರವಾಗಲೇ ಇಲ್ಲ..
ಸುಮ್ಮನೇ ಅಳುತ್ತಲೇ ನಡೆದೇ..
ಅವಳು ನಗುವುದನ್ನು ಮಾತ್ರ ನೋಡಿದ್ದ ಈ ಮನ ಮೌನಿಯಾಗಿರುವುದನ್ನು ನೋಡಲು ಆಗದೆ ಹೊರಟೆ..
ಆದರೆ ನಾ ಮೌನಿಯಾಗಲಿಲ್ಲ, ಅವಳೊಡನೆ ಮಾತನಾಡುತ್ತಲೇ ಇರುವೆ ಪ್ರತಿಯೊಂದು ಕ್ಷಣವೂ, ಪ್ರತಿಯೊಂದು ಕವಿತೆಯಲ್ಲೂ..



ಎಲ್ಲರಿಂದ ದೂರವಾದ ಅವಳು ನನ್ನಿಂದ ದೂರವಾಗಲೇ ಇಲ್ಲ..
ಹೀಗಲೂ ನನ್ನಲ್ಲೇ, ನನ್ನೊಡನೆ ಇದ್ದಾಳೆ..

ಬಂದೆ ಬರುತ್ತಳೇ ಅವಳು ನನ್ನ ಸೇರಲು..
ಹೀಗಲೂ, ಯಾವಾಗಲು, ಎಂದೆಂದಿಗೂ ಕಾಯುವೆ ಅವಳಿಗಾಗಿ..
ಹೌದು ಅವಳಿಗಾಗಿ ಮಾತ್ರವೇ..
I LOVE HER SO MUCH !!



@@ K r I s H || ನನ್ನ ನಿಜವಾದ ಕಥೆ...

6 comments: