Friday, February 15, 2013

ಕನಸಲ್ಲು ಕನಸು ಮರೆಯಾಗಿದೆ.

@@ K r I s H || ನಿನಗಾಗಿಯೇ

KrIsH ! ಪ್ರೀತಿಗಾಗಿ

ಮನದ ಮಾತನ್ನು ಹೇಳುವ ಪ್ರಯತ್ನದಲ್ಲಿ @@ K r I s H ||

@@ K r I s H || ಕಾಯುತ್ತಾ

@@ KrIsH || ಇದೇನಾ ಪ್ರೀತಿ ??

ನೀ ಬರುವೆ ಎಂಬ ನಂಬಿಕೆಯಲ್ಲಿ.

@@ K r I s H || ಕಷ್ಟ ಇದೆ

ನಿನ್ ಪ್ರೇಮಿ ಕಣ್ಣಿ೦ದ ಮತ್ತೊಂದ್ ಹನಿ ನೀರ್ ಬರೋಕ್ ಮುಂಚೆ..

@@ K r I s H || ಪ್ರೀತಿಯ ಅಪ್ಪುಗೆಗಾಗಿ

@@ K r I s H || ನಿನಗೂ ಹೀಗೇನ ???

@@ K r I s H || ಫುಲ್ ಫೀಲಿಂಗೊ ಫೀಲಿಂಗು

@@ K r I s H || ಫೀಲಿಂಗ್ಸ್ ಹೊಳೆ !!

@@ K r I s H || ಏನ್ ಪ್ರೀತಿ ಇದು ದೇವ್ರೆ...

@@ K r I s H || FEEL ಮಾಡುತ್ತೆ ಕಣೆ..

@@ K r I s H || ಪ್ರೀತಿ ಹೀಗೇನ ??

@@ K r I s H || ಕಾಯುತ್ತಾ ಮುತ್ತಿಗಾಗಿ

@@ KrIsH || JUST LOVVAGIDHE.

@@ K r I s H || ನನ್ನ ಸ್ವರ್ಗ ನಿನ್ನಲ್ಲೇ !!

@@ K r I s H || In || ಈ ಹೃದಯ ನಿನ್ನ ಮರೆಯುವುದಿಲ್ಲ..

@@ K r I s H || ಆ ಹುಡುಗಿ ನೀನೆ

@@ K r I s H || ನನ್ನ ಮನ ಕಾಯುತ್ತಿದೆ !!

Thursday, February 14, 2013

ನೋವಿನ ದೋಣಿ !!


ನನ್ನ ಸ್ನೇಹಿತನ ನಿಜವಾದ ಕಥೆ..

ಅವನ ಹೆಸರು ಪ್ರೀತಮ್..
ಹೆಸರಿಗೆ ತಕ್ಕನಾಗಿ ಪ್ರೀತಿ ಅವನತ್ರ STOCK ಇರುತ್ತೆ..
ಅವನ ಜೀವನದಲ್ಲಿ ನಡೆದ ಸತ್ಯ ಘಟನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ..

ಈ ಪ್ರೀತಿ ಅನ್ನೋದು ಜೀವನದಲ್ಲಿ ENTRY ಕೊಟ್ರೆ ಮುಗಿದೋಯ್ಟು...
ಜೀವನ ಸಾಗೋದೇ FULL THRILL ಇಂದ ..

ಅವನ ಜೀವನದ ಪ್ರೀತಿ ಅನುಭವವನ್ನು ಮುಂದಿಡುವ ಮುಂಚೆ ಅವನ ನೋವಿನ FLASH BACK ಅನ್ನು ನೋಡಿ ಬರೋಣ..

ಮಾರ್ಚ್ 27 / 1987..
ಏನು ತಿಳಿಯಾದ ಮುದ್ಧದ ಮಗುವಿನ ಜನನವಾಯಿತು..
MYSOREನ ಕಲ್ಯಾಣಗಿರಿಯಲ್ಲಿ


ಹುಟ್ಟಿದಾಗ ತಾಯಿಯನ್ನು ಕಳೆದುಕೊಂಡ ಇವನಿಗೆ ಪ್ರೀತಿ ಸಿಕ್ಕಿದ್ದೇ ಇಲ್ಲ..
ಪ್ರೀತಿ ಅಂದ್ರೆ ಏನು ?? ಪ್ರೀತಿ ಹೇಗಿರುತ್ತೆ ?? ಪ್ರೀತಿ ಯಾವ ರೀತಿ ತನ್ನನ್ನು ನೋಡಿಕೊಳ್ಳುತ್ತೆ ??
ಹೀಗೆ ಪ್ರಶ್ನೆಗಳ ನಡುವೆ ಅವನ ಜೀವನ ಸಾಗುತ್ತಿತ್ತು..
ಅವನ ಜೀವನದಲ್ಲಿ ಅವನನ್ನು ಅವನ ಹೆಸರಿಟ್ಟೂ ಕರೆಯುವುದಕ್ಕಿಂತ ಹೆಚ್ಚಾಗಿ..
"ಅಪಶಕುನ" / "ಲಾಯಕ್ಕಿಲ್ಲ" ಎಂಬ ಹೆಸರಿನಿಂದ ಕರೆದಿದ್ದೆ ಹೆಚ್ಚು..
ಪ್ರೀತಿಯೇ ನೋಡಿರದ ಅವನಿಗೆ ಬಂದ ಹೆಸರು "ಪ್ರೀತಮ್"
ತಾಯಿಯನ್ನು ಕಳೆದುಕೊಂಡಾಗ ಅವನನ್ನು ಮಗು ಎಂದು ನೋಡುವುದಕ್ಕಿಂತ ಹೆಚ್ಚಾಗಿ ಅಪಶಕುನ ಎಂದು ನೋಡುವುದೇ ಹೆಚ್ಚಾಯಿತು..

ಜೀವನದ ಪ್ರತಿಯೊಂದು ಕ್ಷಣದಲ್ಲಿಯೂ ಬರಿ ನೋವನ್ನೇ ನೋಡುತ್ತಿದ್ದ ಜೀವ ಅದು..
ಪ್ರೀತಿಗಾಗಿ ಹಾತೋರಿಯುತ್ತಿದ್ದ ಜೀವವೂ ಕೂಡ ಅದೇ..


ಬುದ್ಡಿ ಬಂದ ಕ್ಷಣದಿಂದಲೂ ಅವನಿಗೆ ಜೀವನದಲ್ಲಿ ಪ್ರತಿಯೊಂದಕ್ಕೂ ಜೊತೆ ಇದ್ದವರು ಸ್ನೇಹಿತರು ಮಾತ್ರ..
ಚಿಕ್ಕ ವಯಸ್ಸಿನ್ನಿಂದಲೂ ಹೊಟೆಲ್‍ನಲ್ಲಿ ಕೆಲಸ ಮಾಡಿ ಹೇಗೋ ಓದಿ SSLC ಯನ್ನು ಕೂಡ ಮುಗಿಸಿದ..

ಇದು ಅವನ ಒಂದು FLASH BACK ..
ಅವನ ಪ್ರೀತಿ ಹೇಗಿತ್ತು ?? ಯಾವಾಗ ಶುರುವಾಯಿತು ?? ಹೇಗೆ ಶುರುವಾಯಿತು ??
ಅದರಲ್ಲಿದ್ದ ಅಡಚಣೆ, ಸಂತೋಷ ಮತ್ತು ನೋವು ಹೇಗಿತ್ತು..
ಮುಂದಿನ ಸಂಚಿಕೆಯಲ್ಲಿ ಅಂದರೆ ಮುಂದಿನ ವಾರ ನೋಡೋಣ ??

ತಿಳಿಯುವ ಆಶಕ್ತಿ ನಿಮಗಿದ್ಯಾ ???
ಬೇಗ ತಿಳಿಸಿ !! ನಿಮ್ಮ ಅನಿಸಿಕೆಗಾಗಿ ಕಾಯ್ತಾ ಇರ್ತೀನಿ..


ನಿಮ್ಮ ಪ್ರೀತಿಯ,,
@@ K r I s H ||

@@ K r I s H || ಸೋಲಲ್ಲೂ ನಾ ಗೆದ್ದು


ನನ್ನ ಉಸಿರಿನ ಪ್ರತಿ<div class="separator" style="clear: both; text-align: center;"> ಯೊಂದು ಕಣದಲ್ಲಿ..

Tuesday, February 5, 2013

@@ K r I s H || ನೆನಪಲ್ಲೆ ಬಾಳುತ !!


ಬರೋಬ್ಬರಿ ಆರು ವರ್ಷಗಳೇ ಕಳೆದಿದೆ..
ನನ್ನ ಹೃದಯದ ಬಡಿತ ಕಣ್ಮರೆಯಾಗಿ ಕಳೆದೋಗಿದೆ..
ಮರೆಯಲಾಗದ ನೆನಪಾಗಿ ಅವಳ ನಗು, ಮುದ್ದಾದ ಮುಖ ಕಳೆಗುಂದದೆ ಹೃದಯದ ನೆತ್ತರಾಗಿದೆ...
ಹೌದು ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದೆ ಉಳಿಯುವಂತಹದು ಮೊದಲ ಪ್ರೀತಿ..
ನನ್ನ ಜೀವನದಲ್ಲೂ ಅಷ್ಟೇ..
ಮೊದಲ ಆ ಪ್ರೀತಿಯನ್ನು ತೊದಲೊಡನೆ ಹೇಳುತ್ತಿದ್ದೇನೆ..

ನೋಡಿದಾಕ್ಷಣ ನಾ ಸೋತೆ "ಶೀತಲ್" ಎಂಬ ಮುದ್ದದ ಹುಡುಗಿಗೆ..
ಎಲ್ಲಿ ನೋಡಿದೆ ?? ಯಾಕೆ ನೋಡಿದೆ ?? ಹೇಳ್ತೀನಿ !!
ಅದೊಂದು ಕಾಲ ಕಾಲೇಜ್‌ಗೆ ಹೋಗದೇ ಟ್ಯೂಸನ್ಗೆ ಹೋಗಿ ಓದುತ್ತಿದ್ದ ಕಾಲ..
ನಾನು ಅಷ್ಟೇ ಹಾಗೆಯೇ ಓದಲೆಂದೆ ಸೇರಿದೆ ಅದೇ ಆ ಟ್ಯೂಸನ್ಗೆ..
ಆಗಲೇ ನಾ ನೋಡಿದ್ದು ಅವಳನ್ನು ಮೊದಲ ಬಾರಿ...
9th Aug 2005 ಸಂಜೆ ಸುಮಾರು 6.30 ಇರಬಹುದು..
ಮಂದ ಬೆಳಕಲ್ಲು, ಬೆಳಕಾಗಿಯೇ ಕಂಡಳವಳು..
ಮನೆಗೆ ಹೋಗಿ ರಾತ್ರಿಯೆಲ್ಲ ಅವಳನ್ನೇ ನೆನೆದು ಒದ್ದಾಡುವಾಗಲೇ ಗೊತ್ತಾಗಿದ್ದು..
ಅದು ಪ್ರೀತಿ ಎಂದು..
ಯಾರಿಗೂ ಸೋಲದ ಈ ಮನ ಸೋತಿತು ಎಂದು..



ಪ್ರತಿ ದಿನ ಹೋಗುತ್ತಿದ್ದೆ ಟ್ಯೂಸನ್ಗೆ ಓದಲೆಂದು ಅಲ್ಲ..
ಅವಳನ್ನು ನೋಡಲೆಂದು..
ಎರಡು ವರ್ಷ ಹೀಗೆ ಕಳೆದೋಯಿತು..
ಪ್ರತಿದಿನ ನೋಡುವುದು, ಮಾತನಾಡದೇ ಬರುವುದು..
ನಗುತ್ತಲೇ.. ಹುಚ್ಚನಂತೆ... ಪ್ರೀತಿಸುತ್ತಲೇ..

ಇರುತ್ತಾರಲ್ಲ ಸ್ನೇಹಿತರು ಪ್ರೇಮಿಗಳ ದಿನದಂದು (Feb 14th 2007 ) ಧೈರ್ಯ ತುಂಬಿ ಕಳುಹಿಸಿದರು ನನ್ನನ್ನು..
ಅವಳೆದುರು ಪ್ರೀತಿ ತಿಳಿಸೆನ್ನುತ್ತಾ..
ನಾನು ಹೋದೆ, ಮನದಲ್ಲಿ ಮೌನವಾಗಿದ್ದ ಪ್ರೀತಿಯನ್ನು ತಿಳಿಸಿದೆ.
ಅವಳು ಮೌನಿಯಾಗಿಯೇ ಹೊರಟು ಹೋದಳು..


ಮಾತಿಲ್ಲ ಕಥೆಯಿಲ್ಲ ಬಾರಿ ರೋಮಾಂಚನವೇ ನನಗಂದು..
ಪ್ರೀತಿ ತಿಳಿಸಿದ ಖುಷಿಗೆ..
ಆದರೆ ಆ ಖುಷಿ ಕೊನೆಯಾಗುವ ವೇಳೆ ಬಂದು ಬಿಟ್ಟಿತು..
ಹೌದು... ಪ್ರತಿದಿನ ಬರುತ್ತಿದ್ದ ಅವಳು ಟ್ಯೂಸಾನನ್ನೂ ಬಿಟ್ಟು ಬಿಟ್ಟಿದ್ದಳು..
ಎಲ್ಲಿರುವಳೋ ?? ಹೇಗಿರುವಳೋ ?? ನಾನು ಅವಳಿಗೆ ಇಷ್ಟವೋ ?? ಇಲ್ಲವೋ ??
ಇವೆಲ್ಲ ಪ್ರಶ್ನೆಗಳ ಮಧ್ಯೆ ನನ್ನ ಜೀವನ ಸಾಗುತ್ತಲೇ ಹೋಯಿತು..
ಆದರೆ ಒಂದು ದಿನ ಅವಳು ನನಗೆ ಸಿಗುವಳು ಎಂಬ ನಂಬಿಕೆಯಿತ್ತು..
ಆ ನಂಬಿಕೆ ಸುಳ್ಳಾಗಲಿಲ್ಲ..
3rd Dec 2007 ನಂದು ಅವಳನ್ನು ಅದೇ ಟ್ಯೂಸನ್ ಹತ್ತಿರ ಕಂಡೆ..
( ಮನೆ ಹತ್ತಿರವೇ ಆ ಸ್ಥಳವಿದ್ದುದ್ದರಿಂದ ಪ್ರತಿದಿನ ಅಲ್ಲೇ ತಿರುಗಾಡುತ್ತಾ ಇದ್ದೇ )
ಪ್ರೀತಿ ಬಗ್ಗೆ ಮಾತನಾಡದೇ ಗೆ ಮನೆಗೆ ಬರಬೇಕೆಂದು ಕೇಳಿಕೊಂಡೆ ಅವಳು ಬರುತ್ತಿನಿ ಎಂದು ಹೇಳಿ ಹೊರಟು ಹೋದಳು..
ಇನ್ನೇನು ಮುಂದಿನ ಆ 22 ದಿನಗಳು ನನಗೆ ವರುಷಗಳಂತೆ ಬಾಸವಾಯಿತು..
ಅವಳು ಬಂದಳು ಅವಳ ಸ್ನೇಹಿತರೊಡನೆ..
ಎಲ್ಲಿಲ್ಲದ ಆನಂದ ಈ ಮನದಲ್ಲಂದು..
ಬರೋಬ್ಬರಿ 2 ತಾಸು ಅವಳೊಂದಿಗೆ ಕಳೆದೆ..
ಮನೆಗೆ ಹೊರಡುವ ಸಮಯ ಹತ್ತಿರ ಬರುತ್ತಿದ್ದಂತೆ ನನ್ನ ಮರೆಯೋದಿಲ್ವಾ?? ಎಂದು ಕೇಳಿದಳು..
ನಾನು ನಗುತ್ತಾ ಸುಮ್ಮನಾದೆ..
ಅವಳ ಫೋನ್ ನಂಬರ್ ಕೊಟ್ಟು ಹೊರಟು ಹೋದಳು..
ಅವಳ ಕಣ್ಣಲ್ಲಿ ಮೂಡಿದ ಪ್ರತಿಯೊಂದು ಹನಿಯು ಬಚ್ಚಿಕೊಂಡು ನನ್ನ ಕೂಗಿ ಕರೆಯುತ್ತಿತ್ತು..
ಬೇರೆ ವಿಧಿಯಿಲ್ಲದೇ ಸುಮ್ಮನಾದೆ..
ಆ ದಿನ ಜೀವನದಲ್ಲಿ ಮರೆಯಲಾಗದ ದಿನ..


ನಿದ್ರೆಯಿಲ್ಲದೇ, ಊಟವಿಲ್ಲದೇ ಅವಳ ನೆನಪಲ್ಲೆ ಕಳೆದೆ..
ಬೆಳಿಗ್ಗೆ ನಿದ್ರೆ ಬಂದು ಮಲಗಿದೆ..
ಯಾರೋ ಬಾಗಿಲು ತಟ್ಟಿದ ಶಭ್ದ..
ತೆರೆದರೆ ನನ್ನ ಸ್ನೇಹಿತರು ಯಾವುದೋ ಆಟೋವಿನಲ್ಲಿ ಬಂದು..
ನನ್ನ ಬಾ ಹೊರಗೆ ಹೋಗಿ ಸಿಗರೇಟ್ ಸೇದಿ ಬರೋಣ ಎಂದು ಕರೆದುಕೊಂಡು ಹೋದರು..
ಅವರು ಕರೆದುಕೊಂಡು ಹೋಗಿದ್ದು ನನ್ನ ಹೃದಯದ ಬಡಿತವಾಗಿದ್ದ ನನ್ನ ಶೀತಲ್ ಮನೆಗೆ..
ಯಾಕೆಂದು ಗೊತ್ತಾಗಲಿಲ್ಲ..
ಆಮೇಲೆ ನನ್ನ ಹೃದಯ ಛಿದ್ರವಾಯಿತು..
ನನ್ನ ಪ್ರೀತಿ ಶಾಶ್ವತವಾಗಿ ಮೌನಿಯಾಗಿತ್ತು..
ಬೆಳಿಗ್ಗೆ ಕಾಲೇಜ್ಗೆ ಹೋಗುವಾಗ ಅಪಘಾತವಾಗಿ ಅವಳು ಎಲ್ಲರನ್ನೂ ಬಿಟ್ಟು ದೂರಹೋಗಿಬಿಟ್ಟಿದ್ದಳು..
ಆದರೆ ನನ್ನಿಂದ ದೂರವಾಗಲೇ ಇಲ್ಲ..
ಸುಮ್ಮನೇ ಅಳುತ್ತಲೇ ನಡೆದೇ..
ಅವಳು ನಗುವುದನ್ನು ಮಾತ್ರ ನೋಡಿದ್ದ ಈ ಮನ ಮೌನಿಯಾಗಿರುವುದನ್ನು ನೋಡಲು ಆಗದೆ ಹೊರಟೆ..
ಆದರೆ ನಾ ಮೌನಿಯಾಗಲಿಲ್ಲ, ಅವಳೊಡನೆ ಮಾತನಾಡುತ್ತಲೇ ಇರುವೆ ಪ್ರತಿಯೊಂದು ಕ್ಷಣವೂ, ಪ್ರತಿಯೊಂದು ಕವಿತೆಯಲ್ಲೂ..



ಎಲ್ಲರಿಂದ ದೂರವಾದ ಅವಳು ನನ್ನಿಂದ ದೂರವಾಗಲೇ ಇಲ್ಲ..
ಹೀಗಲೂ ನನ್ನಲ್ಲೇ, ನನ್ನೊಡನೆ ಇದ್ದಾಳೆ..

ಬಂದೆ ಬರುತ್ತಳೇ ಅವಳು ನನ್ನ ಸೇರಲು..
ಹೀಗಲೂ, ಯಾವಾಗಲು, ಎಂದೆಂದಿಗೂ ಕಾಯುವೆ ಅವಳಿಗಾಗಿ..
ಹೌದು ಅವಳಿಗಾಗಿ ಮಾತ್ರವೇ..
I LOVE HER SO MUCH !!



@@ K r I s H || ನನ್ನ ನಿಜವಾದ ಕಥೆ...

@@ K r I s H || ಇಷ್ಟವಾದ ಪ್ರೀತಿಯಲ್ಲಿ ಕಷ್ಟವಿದೆ !!

Monday, February 4, 2013

ನಿನ್ನ ಹೆಜ್ಜೆ ಗುರುತಲ್ಲಿ, ಕಾಲ್ಗೆಜ್ಜೆ ಮಾತಾಡಿದಾಗ !!


@@ K r I s H || ನಿನ್ನ ಹೆಜ್ಜೆ ಗುರುತಲ್ಲಿ, ಕಾಲ್ಗೆಜ್ಜೆ ಮಾತಾಡಿದಾಗ !!




ನಿನ್ನೊಂದಿಗಿನ ಆ ದಿನದ ನೆನಪು ಮರುಕಳಿಸಿ ಈ ಮನದಲ್ಲಿ ನೂರಾರು ಕವಿತೆಗಳನ್ನು ಹೊರಹೊಮ್ಮುವಂತೆ ಮಾಡಿದೆ..
ಪ್ರೇಮ ಪತ್ರಗಳು ನನ್ನ ಪ್ರೀತಿಯ ಪದಗಳಲ್ಲಿ ಮೂಡಿದ ನಿನ್ನ ಮೇಲಿನ ಬಾವನೆಗಳನ್ನು ಛಾಪುಮೂಡುವಂತೆ ಮಾಡಿದೆ...
ಕಾಲ ನಡಿಗೆಯಲ್ಲಿ ಬಂದ ಗೆಜ್ಜೆಯ ಶಬ್ಧವೂ ಕೆಲವರಿಗೆ ಕೆಲವು ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ..
ಆ ನೆನಪುಗಳು ನನ್ನಲ್ಲೂ ಮೆಲುಕು ಹಾಕುತ್ತಿದೆ...
ನಿನಗೆ ಆ ಭಾವನೆಗಳನ್ನು ತಿಳಿಸೆಂದು ಈ ಮನ ಹಾತೋರಿಯುತ್ತಿದೆ..
ನಿನ್ನೊಂದಿಗೆ ಹೇಳಲಾಗದೆ ನಾನೇ ಪಿಸುಗುಡುತ್ತಿರುವೆ !! ಹುಚ್ಚು ಪ್ರೇಮಿಯಾಗಿ !!

ಇವತ್ತಿಗೆ ಏಳು ತಿಂಗಳಾಯಿತು !!
ಏಳು ತಿಂಗಳ ಹಿಂದೆ ಇದೆ ನದಿ ತೀರದಲ್ಲಿ ನಾ ಖಾಲಿ ಹೃದಯದಿ ಮಲಗಿರಲು..
ಎದ್ದೇಳು ನಿನ್ನವಳು ಬರುತ್ತಿದ್ದಾಳೆ ಎಂದು ಹೇಳುವ ಹಾಗೆ ನಿನ್ನ ಕಾಲ್ಗೆಜ್ಜೆಯ ಆ ಶಬ್ಧ ನನ್ನ ಕೂಗಿದ ಹಾಗೆ ಭಾಸವಾಗಿ..
ನಾ ತಿರುಗಿ ಕಂಡೆ..
ಬಿಗಿ ಬಿಸಿಲಲ್ಲೂ ತಂಪಿನ ಅನುಭವ ಈ ಹೃದಯದಿ ಮೂಡಿತು..
ಕಣ್ಣ ರೆಪ್ಪೆಯನ್ನು ಬಡಿಯುತ್ತಾ ನೋಡಲು..
ಆ ನಿನ್ನ ಕಾಲುಗಳು ನಾಟಿತು ಈ ಕಣ್ಣನ್ನು..
ಹೃದಯವ ಹಿಡಿತದಲ್ಲಿಟ್ಟು ನಾ ಮೆಲ್ಲಗೆ ನೋಡಲು..
ಸೋತಿತು ಕಣೆ ಈ ಖಾಲಿ ಹೃದಯ..
ನಿನ್ನ ನಗು ಈ ಹೃದಯದ ಜಾಗವನ್ನು ಆಕ್ರಮಿಸಲು..
ಖಾಲಿ ಹೃದಯದಿ ತಿಳಿಯದ ಪ್ರೀತಿ ಮೂಡಿ ಬಾರವಾಗಿ ಕುಸಿದು ಬಿದ್ದೆ ಆ ಕ್ಷಣ..

ಮತ್ತೆ ಎದ್ದು ನಾ ನಿನ್ನಿಂದೆ ಬಂದೆ..
ಯಾಕೆ ಈ ಅನುಭವ ನನ್ನಲ್ಲಿ ಎಂದು ಕೇಳಲು..
ಧೈರ್ಯವಿಲ್ಲದೇ ಆ ಕ್ಷಣ ಸುಮ್ಮನಾಯಿತು ಈ ಮನ..

ನೀನು ಕೂಡ ಹೊರಟು ಹೋದೆ..
ನಾನು ಕೂಡ ಮನೆಗೆ ಮರಳಿದೆ..
ಹೃದಯವ ಕದ್ದ ಚೋರಿ ನೀ ನಿದ್ದೆಯನ್ನು ಕದ್ದೆ..
ಗಡಿಯಾರವ ನೋಡುತ್ತಾ ಪಿಸುಗುಡುತ್ತಾ ಬೆಳಿಗ್ಗೆ ಆದರೆ ಸಾಕೆಂದು ಕಾದೆ...

ಬೆಳಿಗ್ಗೆ ಓಡಿ ಬಂದೆ ಅದೇ ಕಡಲ ತೀರದಿ..
ನಿನ್ನ ನೋಡುವ ನಂಬಿಕೆಯಲ್ಲಿ, ಹೇಳತೀರದ ಆಸೆಯಲ್ಲಿ..
ನೀ ಬರಲೇ ಇಲ್ಲ..
ಒಂದು ದಿನ ಎರಡಾಯಿತು..
ಎರಡು ಮೂರಾಯಿತು..
ನನ್ನ ಮನ ಬಿಡಲಿಲ್ಲ ಮರೆಯಲು..
ಬದಲಾಗಿ ಪ್ರೇರೇಪಿಸಿತು ಮಾತೆ ಹಾಗೆ ಕಾಯಲು..
ಕಾದೆ ಕಾದೆ ನೀ ಬರಲೇ ಇಲ್ಲ..

ಹೀಗಲೂ ಅದೇ ಪ್ರೀತಿಯಲ್ಲಿ ಕಾಯುತ್ತಲೇ ಇರುವೆ..
ಪ್ರತಿಯೊಬ್ಬರ ಹೆಜ್ಜೆಯ ಗುರುತನ್ನು ಕಂಡು..
ಕಾಲ್ಗೆಜ್ಜೆಯ ಶಬ್ಧವ ಎದುರು ನೋಡುತ್ತಾ..


ಪ್ರೀತಿ ಹೀಗೇನ ?? ನೀ ಬರಲಾರೆಯಾ ???
ಎಂದು ಕಾಯುತ್ತಾ..
ಕಾಲ್ಗೆಜ್ಜೆಗೆ ಸೋತ ಹೃದಯವ ಸಲಹುತ್ತ !!