@@ K r I s H || ನಿನ್ನ ಹೆಜ್ಜೆ ಗುರುತಲ್ಲಿ, ಕಾಲ್ಗೆಜ್ಜೆ ಮಾತಾಡಿದಾಗ !!
ನಿನ್ನೊಂದಿಗಿನ ಆ ದಿನದ ನೆನಪು ಮರುಕಳಿಸಿ ಈ ಮನದಲ್ಲಿ ನೂರಾರು ಕವಿತೆಗಳನ್ನು ಹೊರಹೊಮ್ಮುವಂತೆ ಮಾಡಿದೆ..
ಪ್ರೇಮ ಪತ್ರಗಳು ನನ್ನ ಪ್ರೀತಿಯ ಪದಗಳಲ್ಲಿ ಮೂಡಿದ ನಿನ್ನ ಮೇಲಿನ ಬಾವನೆಗಳನ್ನು ಛಾಪುಮೂಡುವಂತೆ ಮಾಡಿದೆ...
ಕಾಲ ನಡಿಗೆಯಲ್ಲಿ ಬಂದ ಗೆಜ್ಜೆಯ ಶಬ್ಧವೂ ಕೆಲವರಿಗೆ ಕೆಲವು ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ..
ಆ ನೆನಪುಗಳು ನನ್ನಲ್ಲೂ ಮೆಲುಕು ಹಾಕುತ್ತಿದೆ...
ನಿನಗೆ ಆ ಭಾವನೆಗಳನ್ನು ತಿಳಿಸೆಂದು ಈ ಮನ ಹಾತೋರಿಯುತ್ತಿದೆ..
ನಿನ್ನೊಂದಿಗೆ ಹೇಳಲಾಗದೆ ನಾನೇ ಪಿಸುಗುಡುತ್ತಿರುವೆ !! ಹುಚ್ಚು ಪ್ರೇಮಿಯಾಗಿ !!
ಇವತ್ತಿಗೆ ಏಳು ತಿಂಗಳಾಯಿತು !!
ಏಳು ತಿಂಗಳ ಹಿಂದೆ ಇದೆ ನದಿ ತೀರದಲ್ಲಿ ನಾ ಖಾಲಿ ಹೃದಯದಿ ಮಲಗಿರಲು..
ಎದ್ದೇಳು ನಿನ್ನವಳು ಬರುತ್ತಿದ್ದಾಳೆ ಎಂದು ಹೇಳುವ ಹಾಗೆ ನಿನ್ನ ಕಾಲ್ಗೆಜ್ಜೆಯ ಆ ಶಬ್ಧ ನನ್ನ ಕೂಗಿದ ಹಾಗೆ ಭಾಸವಾಗಿ..
ನಾ ತಿರುಗಿ ಕಂಡೆ..
ಬಿಗಿ ಬಿಸಿಲಲ್ಲೂ ತಂಪಿನ ಅನುಭವ ಈ ಹೃದಯದಿ ಮೂಡಿತು..
ಕಣ್ಣ ರೆಪ್ಪೆಯನ್ನು ಬಡಿಯುತ್ತಾ ನೋಡಲು..
ಆ ನಿನ್ನ ಕಾಲುಗಳು ನಾಟಿತು ಈ ಕಣ್ಣನ್ನು..
ಹೃದಯವ ಹಿಡಿತದಲ್ಲಿಟ್ಟು ನಾ ಮೆಲ್ಲಗೆ ನೋಡಲು..
ಸೋತಿತು ಕಣೆ ಈ ಖಾಲಿ ಹೃದಯ..
ನಿನ್ನ ನಗು ಈ ಹೃದಯದ ಜಾಗವನ್ನು ಆಕ್ರಮಿಸಲು..
ಖಾಲಿ ಹೃದಯದಿ ತಿಳಿಯದ ಪ್ರೀತಿ ಮೂಡಿ ಬಾರವಾಗಿ ಕುಸಿದು ಬಿದ್ದೆ ಆ ಕ್ಷಣ..
ಮತ್ತೆ ಎದ್ದು ನಾ ನಿನ್ನಿಂದೆ ಬಂದೆ..
ಯಾಕೆ ಈ ಅನುಭವ ನನ್ನಲ್ಲಿ ಎಂದು ಕೇಳಲು..
ಧೈರ್ಯವಿಲ್ಲದೇ ಆ ಕ್ಷಣ ಸುಮ್ಮನಾಯಿತು ಈ ಮನ..
ನೀನು ಕೂಡ ಹೊರಟು ಹೋದೆ..
ನಾನು ಕೂಡ ಮನೆಗೆ ಮರಳಿದೆ..
ಹೃದಯವ ಕದ್ದ ಚೋರಿ ನೀ ನಿದ್ದೆಯನ್ನು ಕದ್ದೆ..
ಗಡಿಯಾರವ ನೋಡುತ್ತಾ ಪಿಸುಗುಡುತ್ತಾ ಬೆಳಿಗ್ಗೆ ಆದರೆ ಸಾಕೆಂದು ಕಾದೆ...
ಬೆಳಿಗ್ಗೆ ಓಡಿ ಬಂದೆ ಅದೇ ಕಡಲ ತೀರದಿ..
ನಿನ್ನ ನೋಡುವ ನಂಬಿಕೆಯಲ್ಲಿ, ಹೇಳತೀರದ ಆಸೆಯಲ್ಲಿ..
ನೀ ಬರಲೇ ಇಲ್ಲ..
ಒಂದು ದಿನ ಎರಡಾಯಿತು..
ಎರಡು ಮೂರಾಯಿತು..
ನನ್ನ ಮನ ಬಿಡಲಿಲ್ಲ ಮರೆಯಲು..
ಬದಲಾಗಿ ಪ್ರೇರೇಪಿಸಿತು ಮಾತೆ ಹಾಗೆ ಕಾಯಲು..
ಕಾದೆ ಕಾದೆ ನೀ ಬರಲೇ ಇಲ್ಲ..
ಹೀಗಲೂ ಅದೇ ಪ್ರೀತಿಯಲ್ಲಿ ಕಾಯುತ್ತಲೇ ಇರುವೆ..
ಪ್ರತಿಯೊಬ್ಬರ ಹೆಜ್ಜೆಯ ಗುರುತನ್ನು ಕಂಡು..
ಕಾಲ್ಗೆಜ್ಜೆಯ ಶಬ್ಧವ ಎದುರು ನೋಡುತ್ತಾ..
ಪ್ರೀತಿ ಹೀಗೇನ ?? ನೀ ಬರಲಾರೆಯಾ ???
ಎಂದು ಕಾಯುತ್ತಾ..
ಕಾಲ್ಗೆಜ್ಜೆಗೆ ಸೋತ ಹೃದಯವ ಸಲಹುತ್ತ !!


nanna manna thumbittu ee ollumeya nudigalinda....
ReplyDeleteThanks dear :)
Deleteಚೆನ್ನಾಗಿದೆ ಚೆನ್ನಾಗಿದೆ ....
ReplyDeleteThanks a lot bhai :)
Deletetumba chenagide bro ")
ReplyDeleteThanks sis :)
Deleteavaru bande baruthare barali yendu nanu keli kolluyve nimgagi
ReplyDeleteHa ha ... :) Nodona :)
Delete